`ಸೋಡಾ ಬುಡ್ಡಿ` ಈ ವಾರ ತೆರೆಗೆ
Posted date: 13 Wed, Apr 2016 – 11:19:05 AM

ಪರ್ಫೆಕ್ಟ್ ಪಿಕ್ಚರ್ ಅಡಿಯಲ್ಲಿ ತಯಾರಾಗಿರುವ ದಿ ಗ್ರೇಟ್ ಸ್ಟೋರಿ ಆಫ್ ‘ಸೋಡಾ ಬುಡ್ಡಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಇದು ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಅವರ ಪ್ರಥಮ ಪ್ರಯತ್ನ. ಯು ಬಿ ಉದಯ್ ಹಾಗೂ ವೆಂಕಟರಾಜ್ ಭಟ್ ನಿರ್ಮಾಣದ ಚಿತ್ರ ‘ಸೋಡಾ ಬುಡ್ಡಿ’ ಪ್ರಯೋಗಾತ್ಮಕ ಎಳೆ ಹೊಂದಿರುವ ಕಥಾ ವಸ್ತು. ವ್ಯಾಪಾರಿ ದೃಷ್ಟಿಯಿಂದ ಚಿತ್ರಕಥೆ ಸಿದ್ದಪಡಿಸಲಾಗಿದೆ. ಮೋಹಿತ್ ಈ ಹಿಂದೆ ೨೦ ನಿಮಿಷದ ‘ಸಿನಿಮಾ’ ಕಿರು ಚಿತ್ರಕ್ಕೆ ೨೦೧೨ರಲ್ಲಿ ‘ನ್ಯಾಕ್ಟ್’ ಪ್ರಶಸ್ತಿ ಸ್ವೀಕರಿಸಿದ್ದವರು.
ಹರೀಶ್ ನಾಯಕ್ ಅವರ ಛಾಯಾಗ್ರಹಣ, ಮಿಥುನ್ ಅವರ ಸಂಗೀತ, ಗಿರೀಶ್ ಅವರ ಸಂಕಲನ, ರಾಮ್ ದೇವ್ ಅವರು ಸಾಹಸ ಒದಗಿಸಿದ್ದಾರೆ. ಉತ್ಪಲ್, ಸುಶ್ಮಿತ, ಅನುಷ ಮುಖ್ಯ ಪಾತ್ರಧಾರಿಗಳು. ರಂಗಾಯಣ ರಘು ಹಾಗೂ ಅಚ್ಯುತ್ ಕುಮಾರ್ ಸಹ ಪೋಷಕ ಪಾತ್ರಗಳಲ್ಲಿ ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed